ಹಳ್ಳಿಯಿಂದ ಹಳ್ಳಿ, AI ಟೂಲ್ ಗಳಿಗಾಗಿ ಬ್ಲಾಕ್ ಗಳನ್ನು ನಿರ್ಮಾಣ ಮಾಡುವುದು ಮತ್ತು ಶಿಕ್ಷಣವನ್ನೂ ಸಹ ನೀಡುತ್ತದೆ

Woman leaning against a pole, looking at her phone in a group of women

ಖರಾಡಿ, ಮಹಾರಾಷ್ಟ್ರ, ಭಾರತ: ರಾತ್ರಿ 10.30., ದಿನವಿಡೀ ಬಿಡುವಿಲ್ಲದ ಕೆಲಸದ ನಂತರ ಬಾಬಿ ರಾಜಾರಾಂ ಬೋಕಲೆ ಅವರಿಗೆ ಮಲಗುವ ಮುನ್ನ ಇನ್ನೊಂದು ಕೆಲಸವನ್ನು ಪೂರ್ಣಗೊಳಿಸಬೇಕಿದೆ.

ಆಕೆ ತನ್ನ ಕಾಲುಗಳನ್ನು ಚಾಚಿ ಹಾಸಿಗೆ ಮೇಲೆ ಹಾಗೆಯೇ ಮಲಗುತ್ತಾಳೆ. ಒಂದು ಮೂಲೆಯಲ್ಲಿ ಹಿಂದೂ ದೇವರಾದ ಶ್ರೀಕೃಷ್ಣ ದೇವರು ವರ್ಣರಂಜಿತ ದೀಪಗಳಿಂದ ಹೊಳೆಯುತ್ತಿದ್ದಾನೆ. ಹಾಸಿಗೆಯ ಮೇಲೆಯೇ ಆಕೆಯ ನಿಧನ ಹೊಂದಿದ ಪತಿಯ ಭಾವಚಿತ್ರ ತೂಗಾಡುತ್ತಿದೆ. ಬೂದುಮೀಸೆಯ ಮತ್ತು ನೇರ ನೋಟದ ವ್ಯಕ್ತಿ ಅವರಾಗಿದ್ದರು.

ಆಕೆ ತನ್ನ ಸ್ಮಾರ್ಟ್ ಫೋನ್ ನಿಂದ ಒಂದು ಆ್ಯಪ್ ಅನ್ನು ಓಪನ್ ಮಾಡುತ್ತಾಳೆ ಮತ್ತು ತನ್ನ ಸ್ಪಷ್ಟವಾದ ಮತ್ತು ಪ್ರತಿಧ್ವನಿಸುವ ಧ್ವನಿಯಲ್ಲಿ ಆಕೆ ತನ್ನ ಮಾತೃಭಾಷೆಯಾದ ಮರಾಠಿಯಲ್ಲಿ ಆ್ಯಪ್ ನಲ್ಲಿದ್ದ ಕಥೆಯನ್ನು ಓದಲು ಪ್ರಾರಂಭಿಸುತ್ತಾಳೆ. ಪುಣೆ ನಗರದ ಉಪನಗರವಾದ ಖರಾಡಿಯಲ್ಲಿ ಆಕೆ ವಾಸಿಸುತ್ತಾಳೆ.

ಇತರರ ಧ್ವನಿಗಳೊಂದಿಗೆ ಬೋಕಲೆ ಅವರ ಧ್ವನಿಯನ್ನು ರೈಲುಗಳಲ್ಲಿ AI ಮಾಡೆಲ್ ಗಳ ಸಂದೇಶಗಳಲ್ಲಿ ಮರಾಠಿ ಭಾಷೆಯಲ್ಲಿ ಬಳಸಲಾಗುತ್ತದೆ. ಆದರೆ, ಅದೇ ವೇಳೆ, ಆಕೆ ತನಗಾಗಿ ಮೌಲ್ಯಯುತವಾದ ಪಾಠಗಳನ್ನು ಕಲಿಯುತ್ತಿದ್ದು, ಪರ್ಸನಲ್ ಫೈನಾನ್ಸ್ ವಿಷಯವನ್ನು ಕಲಿಯುತ್ತಿದ್ದಾಳೆ. ಅವಳು ಓದುತ್ತಿದ್ದ ಕಥೆಯನ್ನು ಮನರಂಜನಾ ರೀತಿಯಲ್ಲಿ ಜನರಿಗೆ ಹತ್ತಿರವಾಗುವಂತೆ ಪ್ರಾಯೋಗಿಕವಾಗಿ ಮಾಹಿತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅಂದರೆ, ಬ್ಯಾಂಕುಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಉಳಿತಾಯ ಮಾಡುವುದು ಹೇಗೆ ಮತ್ತು ವಂಚಕರು, ಮೋಸಗಾರರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿಗಳಿಗೆ ಧ್ವನಿ ನೀಡುತ್ತಿರುತ್ತಾರೆ.

“ಈಗ ನಾನು ನನ್ನ ಸ್ಮಾರ್ಟ್ ಫೋನ್ ನಲ್ಲಿ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ಮಾಡಲು ಸಾಧ್ಯವಾಗುತ್ತಿದೆ’’ ಎನ್ನುತ್ತಾರೆ ಆಕೆ. ಭಾರತದ UPI ಪಾವತಿ ವ್ಯವಸ್ಥೆ ಮೂಲಕ ತಾನು ಖರೀದಿಸಿದ ಉತ್ಪನ್ನಗಳಿಗೆ ಹಣ ಪಾವತಿ ಮಾಡುವುದನ್ನು ಕಲಿತಿದ್ದಾಳೆ. ಬ್ಯಾಂಕಿಂಗ್ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಫೋನ್ ಅನ್ನು ಯಾವ ರೀತಿ ಬಳಕೆ ಮಾಡಬೇಕೆಂಬುದನ್ನೂ ಕಲಿತ್ತಿದ್ದಾಳೆ.

A woman sitting on a bed, looking at her smartphone
ಬಾಬಿ ರಾಜಾರಾಮ್ ಬೋಕಲೆ ಅವರು ತಮ್ಮ ಫೋನ್ ನಲ್ಲಿ ಕಾರ್ಯದ ಅಪ್ಲಿಕೇಶನ್ ನಲ್ಲಿ ಮರಾಠಿಯಲ್ಲಿ ಕಥೆಯನ್ನು ಓದುತ್ತಿರುವುದು. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್
A woman’s hands holding a smartphone
ಬಾಬಿ ರಾಜಾರಾಮ್ ಬೋಕಲೆ ಅವರು ಕಾರ್ಯ ಅಪ್ಲಿಕೇಶನ್ ಅನ್ನು ಬಳಸಿ ಮಹಾರಾಷ್ಟ್ರದ ರಾಜ್ಯಭಾಷೆಯಾಗಿರುವ ಮರಾಠಿಯಲ್ಲಿ ಓದುತ್ತಿರುವುದು ಮತ್ತು ಬರೆಯುತ್ತಿರುವುದು. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್

ಸಾಮಾಜಿಕ ಪರಿಣಾಮ ಬೀರುವ ಸಂಸ್ಥೆಯಾಗಿರುವ ಕಾರ್ಯದಲ್ಲಿ ಬೋಕಲೆ ಅವರು ಕೆಲಸ ಮಾಡುತ್ತಿದ್ದಾರೆ. ಸಂಸ್ಕೃತದಲ್ಲಿ ಕಾರ್ಯ ಎಂದರೆ “ನಿಮಗೆ ಗೌರವ ತಂದುಕೊಡುವ ಕೆಲಸ ಮಾಡಿ’’ ಎಂದು ಅರ್ಥ. ಇದು ವಿಶ್ವದ ಅಗ್ರಗಣ್ಯ ವಿಶ್ವಾಸಾರ್ಹವಾದ ಡೇಟಾ ಕಂಪನಿ ಎಂದು ವಿವರಿಸುತ್ತದೆ.

ಕಾರ್ಯದ ಮಂತ್ರವೆಂದರೆ, “ಗಳಿಸು, ಕಲಿ ಮತ್ತು ಬೆಳವಣಿಗೆ’’ ಆಗಿದೆ. ಇದು ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ಡೇಟಾ ಸೆಟ್ ಗಳನ್ನು ರಚಿಸುವ ವಿಧಾನವನ್ನು ಕ್ರಾಂತಿಕಾರಿಯನ್ನಾಗಿ ಮಾಡಲು ಬಯಸುತ್ತದೆ. ಆಧುನಿಕ ಡಿಜಿಟಲ್ ಆರ್ಥಿಕತೆಯಲ್ಲಿ ಆಭಿವೃದ್ಧಿ ಹೊಂದಲು ಸಾಧನಗಳನ್ನು ನೀಡುವಾಗ ಸಾಧ್ಯವಾದಷ್ಟು ಜನರನ್ನು ಬಡತನದಿಂದ ಹೊರತರುವುದು ಈ ಗುಂಪಿನ ಗುರಿಯಾಗಿದೆ. ಅದೇ ಸಮಯದಲ್ಲಿ ಕಾರ್ಯವು ಅಸಾಂಪ್ರದಾಯಿಕ ಕಾರ್ಯಪಡೆಯೊಂದಿಗೆ ಉತ್ತಮ ಗುಣಮಟ್ಟದ ಮತ್ತು ನೈತಿಕ ಡೇಟಾ ಸೆಟ್ ಗಳನ್ನು ನಿರ್ಮಿಸುತ್ತಿದೆ.

ಆ ಡೇಟಾಬೇಸ್ ಗಳು ಮೌಲ್ಯಯುತವಾಗಿವೆ. ಸುಮಾರು 80 ಮಿಲಿಯನ್ ಜನರು ಮರಾಠಿ ಮಾತನಾಡುತ್ತಾರೆ. ಆದರೆ, ಡಿಜಿಟಲ್ ಜಗತ್ತಿನಲ್ಲಿ ಈ ಭಾಷೆಯ ಪ್ರಸ್ತುತಿ ಹೇಳಿಕೊಳ್ಳುವಷ್ಟಿಲ್ಲ. ಭಾರತದಲ್ಲಿ ನೀವು ಹಿಂದಿ ಅಥವಾ ಇಂಗ್ಲೀಷ್ ಮಾತನಾಡದಿದ್ದರೆ ತಂತ್ರಜ್ಞಾನವನ್ನು ಪಡೆಯುವುದು ಕಷ್ಟವಾಗುತ್ತದೆ. ಆ್ಯಪ್ ಗಳು, ಟೂಲ್ ಗಳು ಮತ್ತು ಡಿಜಿಟಲ್ ಸಹಾಯಕಗಳಲ್ಲಿ ಬಹುತೇಕವು ಇಂಗ್ಲೀಷ್ ಮತ್ತು ಹಿಂದಿಯಲ್ಲಿರುವುದರಿಂದ ಈ ಭಾಷೆಗಳನ್ನು ಮಾತನಾಡುವವರು ಸುಲಭವಾಗಿ ಇವುಗಳ ಅನುಕೂಲ ಪಡೆಯುತ್ತಾರೆ. ನೂರಾರು ಮಿಲಿಯನ್ ಸಂಭಾವ್ಯ ಗ್ರಾಹಕರು ಆ ತಂತ್ರಜ್ಞಾನಗಳಿಂದ ಪ್ರಯೋಜನ ಪಡೆಯಬಹುದಾಗಿದೆ ಎಂಬ ಉದ್ದೇಶದಿಂದ ಮೈಕ್ರೋಸಾಫ್ಟ್ ಮತ್ತು ಇತರ ಸಂಸ್ಥೆಗಳು ಸೇರಿ ಸ್ಥಳೀಯ ಭಾಷೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಅಂದರೆ ಸೇವೆಗಳನ್ನು ಒದಗಿಸುವತ್ತ ಮುಂಚೂಣಿಯಲ್ಲಿವೆ.

“ನನ್ನ ಧ್ವನಿಯನ್ನು ರೆಕಾರ್ಡ್ ಮಾಡುತ್ತಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ ಮತ್ತು ಕೆಲವರು ಮರಾಠಿಯನ್ನು ಕಲಿಯುವಂತೆ ಮಾಡುತ್ತಿರುವ ನನ್ನ ಧ್ವನಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’’ ಎಂದು ಬೋಕಲೆ ಹೇಳುತ್ತಾರೆ.

53 ವರ್ಷ ಪ್ರಾಯದ ಬೋಕಲೆ ಅವರು, “ಈ ಟೂಲ್ ಗಳು ಮತ್ತು ಸಂದೇಶಗಳು ಮರಾಠಿಯಲ್ಲೇ ಲಭ್ಯವಾಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’’ ಎನ್ನುತ್ತಾರೆ.

ಆಕೆ ಮನೆಯಲ್ಲಿ ಸಾಂಬಾರು ಪದಾರ್ಥಗಳು, ಮೆಣಸಿನಕಾಯಿ, ಮೆಣಸು ಪುಡಿ ಮಾಡುವ ಸಣ್ಣ ವ್ಯವಹಾರ ನಡೆಸುತ್ತಿದ್ದಾರೆ. ನಾನು ಗಳಿಸಿದ ಹಣವನ್ನು ಗ್ರೈಂಡರ್ ನ ಬಿಡಿಭಾಗಗಳನ್ನು ಖರೀದಿಸಲು ಮತ್ತು ರಿಪೇರಿ ಮಾಡಲು ಬಳಸುತ್ತಿದ್ದೇನೆ. ಏಕೆಂದರೆ, ಸಾಮಾನ್ಯವಾಗಿ ನಾನು ಹೊಂದಿರದ ಹಣವದು’’ ಎಂದು ಅವರು ಹೇಳುತ್ತಾರೆ.

ಕಾರ್ಯ: ಅತ್ಯುತ್ಕೃಷ್ಟ ಡೇಟಾ ಸೃಷ್ಟಿ ಮತ್ತು ಬಡತನ ನಿರ್ಮೂಲನೆ ಸಂಸ್ಥೆ

ಕಾರ್ಯವು ರೈಲುಗಳಲ್ಲಿ AI ಮಾಡೆಲ್ ಗಳಿಗೆ ಅನೇಕ ಭಾರತೀಯ ಭಾಷೆಗಳಲ್ಲಿ ಡೇಟಾಸೆಟ್ ಗಳನ್ನು ರಚಿಸುತ್ತದೆ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶದ ಭಾರತೀಯರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಸಂಶೋಧನೆ ನಡೆಸುತ್ತದೆ.

2017 ರಲ್ಲಿ ಮೈಕ್ರೋಸಾಫ್ಟ್ ರೀಸರ್ಚ್ ಪ್ರಾಜೆಕ್ಟ್ ಆಗಿ ಕಾರ್ಯ ತನ್ನ ಕಾರ್ಯಾರಂಭ ಮಾಡಿತು.

ನಂತರದಲ್ಲಿ ಕಾರ್ಯ ಭಾರತದ ಹಲವು ಭಾಷೆಗಳಲ್ಲಿ ಅತ್ಯುತ್ಕೃಷ್ಟ ಭಾಷಾ ಡೇಟಾಸೆಟ್ ಗಳನ್ನು ರಚಿಸುವುದು ಮತ್ತು ಶಿಕ್ಷಣ ಹಾಗೂ ಆದಾಯ ಗಳಿಸುವ ಮೂಲಕ ಹೇಗೆ ಬಡತನವನ್ನು ನಿರ್ಮೂಲನೆ ಮಾಡುವ ಮೂಲಕ ಗ್ರಾಮೀಣ ಭಾರತದ ಜನರ ಜೀವನೋಪಾಯವನ್ನು ಸುಧಾರಿಸಲು ನೆರವಾಗುವ ದಿಸೆಯಲ್ಲಿ ಅಗಾಧವಾದ ಸಾಮರ್ಥ್ಯವಿದೆ ಎಂಬುದನ್ನು ಕಂಡುಕೊಂಡಿತು. 2021 ರಲ್ಲಿ ಈ ಯೋಜನೆಯನ್ನು ಮೈಕ್ರೋಸಾಫ್ಟ್ ನಿಂದ ಸ್ವತಂತ್ರ ಸಂಸ್ಥೆಯನ್ನಾಗಿ ರೂಪಿಸಲಾಯಿತು. ಕಾರ್ಮಿಕರು ತಮ್ಮದೇ ಆದ ಸ್ಥಳೀಯ ಭಾಷೆಯಲ್ಲಿ ರೆಕಾರ್ಡ್ ಮಾಡಲು ಮತ್ತು ಬರೆಯಲು ಬಳಸುವ ಅಪ್ಲಿಕೇಶನ್ ಸೇರಿದಂತೆ ಅದರ ಸಂಪೂರ್ಣ ಕಾರ್ಯಾಚರಣೆಯನ್ನು ಮೈಕ್ರೋಸಾಫ್ಟ್ ಅಝೂರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಅದರ ಡೇಟಾವನ್ನು ಮೌಲ್ಯೀಕರಿಸಲು ಅಝೂರ್ ಓಪನ್ AI ಕಾಗ್ನಿಟಿವ್ ಸೇವೆಗಳನ್ನು ಬಳಸುತ್ತದೆ. ಇದರ ಪ್ರಮುಖ ಕ್ಲೈಂಟ್ ಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದಾಗಿದೆ.

ಬೋಕಲೆ ಅವರಂತಹ ಕಾರ್ಮಿಕರಿಗೆ ಕಾರ್ಯ ಪ್ರತಿ ಗಂಟೆಗೆ 5 ಯುಎಸ್ ಡಾಲರ್ ಗಳನ್ನು ನೀಡುತ್ತದೆ. ಇದು ಭಾರತದ ಕನಿಷ್ಠ ವೇತನಕ್ಕಿಂತ ಹೆಚ್ಚಿದೆ. 11 ದಿನಗಳಲ್ಲಿ ಬೋಕಲೆ ಸುಮಾರು ಐದು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಮತ್ತು 2,000 ರೂಪಾಯಿ ಅಥವಾ ಸುಮಾರು 25 ಯುಎಸ್ ಡಾಲರ್ ಗಳ ಹಣ ಸಂಪಾದಿಸುತ್ತಾರೆ. ಈ ಕೆಲಸವು ಆಕರ್ಷಕ ಮತ್ತು ಶೈಕ್ಷಣಿಕವಾಗಿದೆ (ಏಕೆಂದರೆ “ಕಲಿಯಿರಿ’’) ಹಾಗೂ ಕಾರ್ಯದಲ್ಲಿ ಗಳಿಸಿದ ಜ್ಞಾನದಿಂದ ಇನ್ನಷ್ಟು ದುಡಿಯಲು ಕಾರ್ಯ ನೆರವಾಗುತ್ತದೆ. ಇದಲ್ಲದೇ, ಕಾರ್ಯ ರಚನೆ ಮಾಡಿರುವ ಡೇಟಾವನ್ನು ಮರುಮಾರಾಟ ಮಾಡಿದರೆ ಅದಕ್ಕೆ ಕಾರ್ಮಿಕರು ರಾಯಲ್ಟಿಯನ್ನೂ ಪಡೆಯಲಿದ್ದಾರೆ.

ಕಾರ್ಯದ ಸಂಸ್ಥಾಪಕರು ಗುರುತರವಾದ ಗುರಿಗಳನ್ನು ಇಟ್ಟುಕೊಂಡಿದ್ದಾರೆ. 2030 ರ ವೇಳೆಗೆ 100 ಮಿಲಿಯನ್ ಜನರನ್ನು ತಲುಪುವ ಗುರಿಯೊಂದಿಗೆ ಕಾರ್ಯ 200 ಕ್ಕೂ ಹೆಚ್ಚು ಲಾಭರಹಿತ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಸ್ಥಳೀಯ ಜನರಿಗೆ ಅವರದೇ ಭಾಷೆಗಳಲ್ಲಿ ಸೇವೆ ಸಲ್ಲಿಸುವ ಸಾಧನಗಳಿಗೆ ಡೇಟಾ ಆಧಾರವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದೆ. ಯಾವುದೇ ಲಿಂಗಬೇಧವಿಲ್ಲದೇ ಪಕ್ಷಪಾತವಿಲ್ಲದೇ ಡೇಟಾಸೆಟ್ ಗಳನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ಕಾರ್ಯ ಪ್ರಯತ್ನಿಸುತ್ತಿದೆ. ಇದು ಕಾರ್ಯದ ಪ್ರಮುಖ ಉದ್ದೇಶವಾಗಿದ್ದು, ಹೆಚ್ಚು ಅಂತರ್ಗತವಾದ ಡೇಟಾವನ್ನು ನಿರ್ಮಿಸುವ ನಿಟ್ಟಿನಲ್ಲಿ ಜನರ ವಿವಿಧ ಗುಂಪುಗಳನ್ನು ತಲುಪುತ್ತಿದೆ.

27 ವರ್ಷದ ಮನು ಚೋಪ್ರಾ ಅವರು ಈ ಕಂಪನಿಯ ಸಂಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ. ಭಾರತದ ಗ್ರಾಮೀಣ ಭಾಗದಲ್ಲಿನ ಶೇ.78 ರಷ್ಟು ಜನರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಈ ಅಂಶವನ್ನು ಗಮನಿಸಿದರೆ ಕಡಿಮೆ ಮಾತನಾಡುವ ಭಾಷೆಗಳಲ್ಲಿ ಡೇಟಾಸೆಟ್ ಗಳಿಗೆ ಅಗಾಧವಾದ ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಯ ಸಂಸ್ಥೆಯು ಸಿಬ್ಬಂದಿ ಮತ್ತು ಸಂಶೋಧಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಇದರ ಹೆಚ್ಚಿನ ಲಾಭವನ್ನು ತನ್ನ ಕಾರ್ಮಿಕರಿಗೆ ನೀಡಲಿದೆ.

Outside portrait of a man standing in a busy street
ಭಾರತದ ಪುಣೆಯ ಸಮೀಪದ ಖರಾಡಿಯಲ್ಲಿ ಕಾರ್ಯದ ಸಿಇಒ ಮನು ಚೋಪ್ರಾ. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್

“AI ಅನ್ನು ನಿರ್ಮಾಣ ಮಾಡಲು ಜಗತ್ತು ಟ್ರಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ’’ ಎಂದು ಹೇಳುವ ಚೋಪ್ರಾ, “ಆದ್ದರಿಂದ ಮುಂದಿನ 20 ವರ್ಷಗಳಲ್ಲಿ ನಾನು ಈ ಹೂಡಿಕೆಯಲ್ಲಿ ಎಷ್ಟು ಶೇಕಡಾವನ್ನು  ಹೆಚ್ಚು ಅಗತ್ಯವಿರುವ ಜನರ ವ್ಯಾಲೆಟ್ ಗಳಿಗೆ ತಂದುಕೊಡಬಹುದು? ಗ್ರಾಮೀಣ ಭಾರತವು AI ಯ ಅತ್ಯುತ್ತಮ ಬಿಲ್ಡರ್ ಆಗಲೂಬಹುದು. ಆದರೆ, AI ತಂತ್ರಜ್ಞಾನಗಳನ್ನು ಅತ್ಯುತ್ತಮವಾಗಿ ಸ್ವೀಕರಿಸುವವರೂ ಆಗಿರಬಹುದು ಎಂಬುದನ್ನು ನಾವು ಊಹಿಸೋಣ’’ ಎಂದು ಹೇಳಿದರು.

ಕಾರ್ಯಗಾಗಿ ಕೆಲಸ ಮಾಡಿದ ಭಾರತದ 28 ರಾಜ್ಯಗಳ 24 ಪಟ್ಟಣ ಮತ್ತು ಗ್ರಾಮಗಳ 30,000 ಕ್ಕೂ ಅಧಿಕ ಜನರಲ್ಲಿ ಬೋಕಲೆ ಅವರೂ ಒಬ್ಬರು.

ಕಡಿಮೆ ಸಂಪನ್ಮೂಲದ ಭಾಷೆಗಳಲ್ಲಿ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವುದು

AI ನ ಟೂಲ್ ಗಳಾದ OpenAIನ ChatGPT ಮತ್ತು ಮೈಕ್ರೋಸಾಫ್ಟ್ ನ Copilot ಇಂಗ್ಲೀಷ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ಭಾಷೆಯಲ್ಲಿ ಅಂತರ್ಜಾಲದ ಲಿಖಿತ ಮತ್ತು ಆಡಿಯೋ ಸಾಮಗ್ರಿಗಳು ಹೇರಳವಾಗಿ ಲಭ್ಯವಿವೆ. 1.4 ಬಿಲಿಯನ್ ಜನಸಂಖ್ಯೆಯುಳ್ಳ ಭಾರತವು 22 ಅಧಿಕೃತ ಭಾಷೆಗಳು, ನೂರಾರು ಇತರ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳನ್ನು ಹೊಂದಿರುವ ದೇಶವಾಗಿದೆ. ಸುಮಾರು ಶೇ.60 ರಷ್ಟು ಭಾರತೀಯರು ಹಿಂದಿಯನ್ನು ಮಾತನಾಡುತ್ತಾರೆ ಮತ್ತು ಶೇ.10 ರಷ್ಟು ಜನರು ಇಂಗ್ಲೀಷ್ ಮಾತನಾಡುತ್ತಾರೆ. ಆಧುನಿಕ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡುವ ಡಿಜಿಟಲ್ ಸಾಧನಗಳಿಲ್ಲದೇ ನೂರಾರು ಮಿಲಿಯನ್ ಜನರು ಉಳಿದಿದ್ದಾರೆ.

ಬೆಂಗಳೂರಿನ ಮೈಕ್ರೋಸಾಫ್ಟ್ ರೀಸರ್ಚ್ ಲ್ಯಾಬ್ ನಲ್ಲಿ ಭಾಷಾ ತಂತ್ರಜ್ಞ ಮತ್ತು ಸಂಶೋಧಕಿಯಾಗಿರುವ ಕಾಳಿಕಾ ಬಾಲಿ ಅವರು ಮಾತನಾಡಿ, “ಹೆಚ್ಚಿನ ಇಂಟರ್ನೆಟ್ ಇಂಗ್ಲೀಷ್ ನಲ್ಲಿರುವುದು ಆರಂಭ ಮಾಡಲು ಉತ್ತಮ ಸ್ಥಳವಲ್ಲ ಎಂದು ನಾವು ಸರಿಪಡಿಸಲು ಬಯಸುತ್ತೇವೆ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದ್ದಾರೆ. ಕಾರ್ಯ ಸಂಗ್ರಹಿಸಿದ ಡೇಟಾಗಳನ್ನು ಅವರು ತಮ್ಮ ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದಾರೆ.

“ಜನರು ಎಲ್ಲೆಡೆ ಹರಡುತ್ತಿರುವ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯ ಭಾಗವಾಗಬೇಕು. ಅವರ ಭಾಷೆಯಿಂದಾಗಿ ತಂತ್ರಜ್ಞಾನವನ್ನು ಬಳಸುವುದರಿಂದ ಯಾರೂ ಹೊರಗಿರಬಾರದು’’ ಎಂದು ಅವರು ಹೇಳಿದರು.

Portrait of a woman smiling
ಬೆಂಗಳೂರಿನಲ್ಲಿರುವ ಮೈಕ್ರೋಸಾಫ್ಟ್ ರೀಸರ್ಚ್ ಲ್ಯಾಬ್ ನ ಭಾಷಾ ತಂತ್ರಜ್ಞೆ ಮತ್ತು ಸಂಶೋಧಕಿ ಕಾಳಿಕಾ ಬಾಲಿ. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್

“ಮೈಕ್ರೋಸಾಫ್ಟ್ ನಲ್ಲಿ ನಾವು ಇಡೀ ಜಗತ್ತನ್ನು ಸಶಕ್ತಗೊಳಿಸಲು ಬಯಸುತ್ತೇವೆ ಎಂದು ಹೇಳುತ್ತೇವೆ ಸರಿ? ಮತ್ತು ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಇಂಗ್ಲೀಷ್ ಹೊರತುಪಡಿಸಿ ಇತರ ಭಾಷೆಗಳನ್ನು ಬಳಸುತ್ತದೆ’’ ಎಂದರು.

ಕಾಳಿಕಾ ಬಾಲಿ ಅವರ ಪ್ರಕಾರ, “AI ಭಾಷೆಯ ಸಂರಕ್ಷಣೆಯ ಪ್ರಕ್ರಿಯೆಯನ್ನು ಮತ್ತು ದೊಡ್ಡ ಭಾಷಾ ಂಆದರಿಗಳಲ್ಲಿ ಅದರ ಬಳಕೆಯನ್ನು ಹೆಚ್ಚು ವೇಗಗೊಳಿಸಿದೆ. ಇದು ಆನ್ ಲೈನ್ ಮತ್ತು AI ಟೂಲ್ ಗಳನ್ನು ರಚಿಸುವಲ್ಲಿ ಉಪಯುಕ್ತವಾಗಿದೆ. ಆದರೆ, ಅಪರೂಪದ ಅಥವಾ ನಶಿಸಿ ಹೋಗುತ್ತಿರುವ ಭಾಷೆಗಳನ್ನು ಸಂರಕ್ಷಿಸಲು ಇದು ಉಪಯುಕ್ತವಾಗಿದೆ’’ ಎಂದು ಹೇಳಿದರು.

“ಈಗ ನಾವು ಈ ಕೋಪೈಲಟ್ ರೀತಿಯ ವಿಷಯಗಳನ್ನು ನಿಜವಾಗಿಯೂ ತ್ವರಿತವಾಗಿ ರಚಿಸಬಹುದಾಗಿದೆ. ಈ ಹಿಂದೆ ನಾವು ಭಾಷಾ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ ಅಕ್ಷರಶಃ ದಶಕಗಳಿಂದ ನಡೆದ ಪ್ರಯತ್ನಗಳ ಬಗ್ಗೆ ಮಾತನಾಡುತ್ತಿದ್ದೆವು.. . ಅದೆಲ್ಲವನ್ನೂ ಈಗ ತಿಂಗಳಿಗೆ ಮೊಟಕುಗೊಳಿಸಬಹುದು’’ ಎಂದೂ ಅವರು ಹೇಳಿದರು.

2024 ರ ಅಂತ್ಯದ ವೇಳೆಗೆ 1,00,000 ಕ್ಕೂ ಹೆಚ್ಚು ಕೆಲಸಗಾರರೊಂದಿಗೆ ತೊಡಗಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಇಡಲಾಗಿದೆ ಎಂದು ಕಾರ್ಯ ಹೇಳಿದೆ. ಇದಕ್ಕಾಗಿ ಹೆಚ್ಚು ಕೆಲಸ ಮತ್ತು ಶಿಕ್ಷಣದ ಅಗತ್ಯವಿರುವ ಆಸಕ್ತರನ್ನು ಹುಡುಕುತ್ತಿದೆ. ಹೆಚ್ಚಾಗಿ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಆದ್ಯತೆ ನೀಡಲು ಬಯಸುತ್ತದೆ. ಪ್ರೀಮಿಯಂ ವೇತನದ ಜೊತೆಗೆ, ತರಬೇತಿ ಮತ್ತು ಇತರ ಅನುಭವಗಳನ್ನು ನೀಡುತ್ತದೆ.

`ತಂತ್ರಜ್ಞಾನವು ಜನರ ಆಶೋತ್ತರಗಳನ್ನು ಹೆಚ್ಚು ಮಾಡಲು ನಿಜವಾಗಿಯೂ ಸಹಾಯ ಮಾಡುತ್ತದೆ’

ಚೋಪ್ರಾ ಅವರು ದೆಹಲಿಯ “ಬಸ್ತಿ’’ಯಲ್ಲಿ ಬೆಳೆದವರು. ತದ ನಂತರ ಕ್ಯಾಲಿಫೋರ್ನಿಯಾದ ಸ್ಟಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ AI ಕೇಂದ್ರಿತ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವಾಗ ಅವರು  ಬೆಳೆಯುತ್ತಿರುವ AI ತಂತ್ರಜ್ಞಾನವನ್ನು ಗಮನಿಸಿದರು ಮತ್ತು ಅದು ತಮ್ಮ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು’’ ಎಂದು ಹೇಳುತ್ತಾರೆ.

“ನಾನು ಭಾರತಕ್ಕೆ ವಾಪಸಾದಾಗ ನಾನು ತಿಳಿದುಕೊಂಡ ವಿಷಯವೆಂದರೆ, ನಾನು ಹೋದ ಕಡೆಯಲ್ಲೆಲ್ಲಾ ಜನರು ಬಡತನದಿಂದ ಹೊರಬರುವ ಉದ್ದೇಶ ಮತ್ತು ಇಚ್ಛೆಯನ್ನು ಹೊಂದಿದ್ದರು. ಪ್ರತಿಯೊಬ್ಬರೂ ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಆಕಾಂಕ್ಷೆ ಹೊಂದಿದ್ದಾರೆ. ಅವರು ಹೊಸ ಹೊಸ ಕೌಶಲ್ಯಗಳನ್ನು ಕಲಿಯುವ ಸಾಮರ್ಥ್ಯವನ್ನೂ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಂಡೆನು. ಈ ವಿಚಾರದಲ್ಲಿ ತಂತ್ರಜ್ಞಾನವು ನಿಜವಾಗಿಯೂ ಜನರ ಆಸೆ, ನಿರೀಕ್ಷೆಗಳನ್ನು ಹೆಚ್ಚಿಸಲು ಯಾವುದೇ ರೂಪದಲ್ಲಾದರೂ ಸಹಾಯ ಮಾಡುತ್ತದೆ ಎಂಬುದು ನನ್ನ ನಂಬಿಕೆಯಾಗಿದೆ’’ ಎಂದರು.

ಬೋಕಲೆ ಅವರು 11 ದಿನಗಳ ಅವಧಿಯಲ್ಲಿ ಮಾಡಿದ ಕೆಲಸವು ಉಪಯುಕ್ತ ಮಾಹಿತಿಯ ಕಲಿಕೆಯೊಂದಿಗೆ ಡೇಟಾವನ್ನು ಇನ್ಪುಟ್ ಮಾಡುವ ಕೆಲಸವನ್ನು ಸಂಯೋಜಿಸಬಹುದೇ ಎಂಬುದನ್ನು ಪರೀಕ್ಷಿಸುವ ಪೈಲಟ್ ಯೋಜನೆಯ ಭಾಗವಾಗಿದೆ. ಅವರಿಗೆ ಗಣನೀಯ ಪ್ರಮಾಣದ ಹಣವನ್ನು ಗಳಿಸುವಾಗ ಅವರು ಉತ್ತಮವಾಗಿ ಬಳಸಿಕೊಳ್ಳಲು ಅಗತ್ಯವಿರುವ ಹಣಕಾಸಿನ ಸಾಧನಗಳ ಬಗ್ಗೆ ಕಲಿಯುತ್ತಾರೆ. ಈ ವಿಷಯವನ್ನು ಇಬ್ಬರು ಸಹೋದರಿಯರ ಬಗ್ಗೆ ಧಾರವಾಹಿ ಕಥೆಯ ರೂಪದಲ್ಲಿ ಪ್ರಸ್ತುತಪಡಿಸಲಾಯಿತು ಮತ್ತು ಈ ಕಥೆಯನ್ನು ಕಾರ್ಮಿಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಆಡುಭಾಷೆಯ ಮರಾಠಿಯ ಶಬ್ದಗಳು ಮತ್ತು ಲಯಗಳನ್ನು ಸೆರೆಹಿಡಿಯಲು ಗಟ್ಟಿಯಾಗಿ ಓದಿದರು. “ನಾವು ಕಥೆಯನ್ನು ನಿಜವಾಗಿ ಆನಂದಿಸಿದ್ದೇವೆ. ಆ ಕಥೆಯಲ್ಲಿ ಪ್ರತಿದಿನ ಕಷ್ಟಪಟ್ಟು ದುಡಿಯುವ ಸಾಮಾನ್ಯ ಜನರಿದ್ದಾರೆ. ಅವರು ಗಳಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡಲಾಗುತ್ತದೆ. ಆದರೆ, ಯಾವುದೇ ಉಳಿತಾಯ ಮಾಡಲಾಗುತ್ತಿಲ್ಲ. ಹೀಗಾಗಿ ದುಡಿದ ಹಣದಲ್ಲಿ ಉಳಿತಾಯ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡಿತ್ತು’’ ಎನ್ನುತ್ತಾರೆ ಬೋಕಲೆ.

Outside portrait of a girl smiling in a field
ಕಾರ್ಯದ ಚೀಫ್ ಇಂಪ್ಯಾಕ್ಟ್ ಆಫೀಸರ್ ಸಾಫಿಯಾ ಹುಸೇನ್. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್

ಕಾರ್ಯದ ಇಂಪ್ಯಾಕ್ಟ್ ಆಫೀಸರ್ ಆಗಿರುವ ಸಾಫಿಯಾ ಹುಸೇನ್ ಅವರು, “ಕಥೆಯ ಸ್ವರೂಪವು ಯಶಸ್ವಿಯಾಗಿದೆ ಮತ್ತು ಇದರಲ್ಲಿ ಪಾಲ್ಗೊಂಡವರಲ್ಲಿ ಅನೇಕರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಥೆಯನ್ನು ಜೋರು ಧ್ವನಿಯಲ್ಲಿ ಓದಿದರು’’ ಎಂದರು.

“ನಾನು ಈ ಕೆಲಸ ಮಾಡಲಿದ್ದೇನೆ ಮತ್ತು ಕಥೆಯನ್ನು ನಿಮಗೆ ಓದುತ್ತೇನೆ ಎಂದು ಅವರು ಹೇಳುತ್ತಾರೆ’’ ಎಂದು ಹುಸೇನ್ ತಿಳಿಸಿದರು.

“ಅವರು ನಿಜವಾಗಿಯೂ ಕೆಲಸ ಮಾಡಲು ಮತ್ತು ಕಥೆ ಹೇಳಲು ಉತ್ಸುಕರಾಗುತ್ತಾರೆ ಮತ್ತು ತಮ್ಮ ಕೆಲಸದ ಬಗ್ಗೆ ಆಶ್ಚರ್ಯಪಡುತ್ತಾರೆ. ಓಹ್ ಮುಂದೆ ಏನಾಗುತ್ತಿದೆ? ಅವಳಿಗೆ ಸಾಲ ಸಿಗುತ್ತದೆಯೇ? ಅಥವಾ ಮದುವೆಗೆ ಕೊಡುವಷ್ಟು ಹಣ ಆಕೆಯ ಬಳಿ ಇದೆಯೇ?’’ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ.

ಕೆಲಸವನ್ನು ಶಿಕ್ಷಣದೊಂದಿಗೆ ಸಂಯೋಜಿಸುವ ಮೂಲಕ ಕಾರ್ಯವು ತನ್ನ ಕೆಲಸಗಾರರನ್ನು ಗೌರವದಿಂದ ಕಾಣಲು ಪ್ರಯತ್ನಿಸುತ್ತದೆ ಮತ್ತು ಅರ್ಥಪೂರ್ಣವಾದ ಆದಾಯವನ್ನು ಮೀರಿದ ಫಲಿತಾಂಶಗಳು ಬರುವಂತೆ ಪ್ರಯತ್ನಿಸುತ್ತದೆ ಎಂದು ಅವರು ಹೇಳುತ್ತಾರೆ. “ನಾವು ಜನರಿಗೆ ಅವರು ಮಾಡಿದ ಕೆಲಸದ ಸಮಯಕ್ಕಾಗಿ ವೇತನ ನೀಡುತ್ತಿದ್ದೇವೆ ಮತ್ತು ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ಹೇಳುತ್ತಿದ್ದೆವು ಎಂದು ಅವರು ಹೇಳುತ್ತಾರೆ. ಇಲ್ಲಿ ನಿಮ್ಮ ಬಿಡುವಿನ ವೇಳೆಯಲ್ಲಿ ಕಲಿಯಲು ಸಾಕಷ್ಟು ಪಾಠಗಳು ಇಲ್ಲಿವೆ’’ ಎಂದರು.

ಕಾರ್ಯದ ಅನೇಕ ಕಾರ್ಯಕರ್ತರು ಸಂಸ್ಥೆಗಾಗಿ ವಿವಿಧ ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಇಲ್ಲಿ ಸಂಘಟಕರು ಮತ್ತು ಸ್ಥಳೀಯರು ಆಡಳಿತಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಕೆಲಸ ಮಾಡಲು ತಂತ್ರಜ್ಞಾನವನ್ನು ಅಳವಡಿಸುವುದು ಪ್ರಮುಖ ಗುರಿಯಾಗಿದೆ ಎಂದು ಹುಸೇನ್ ಹೇಳುತ್ತಾರೆ.

“ನಾವು ಮರಾಠಿಯಂತಹ ಭಾಷೆಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತಿರುವಾಗ ಲಕ್ಷಾಂತರ ಮತ್ತು ಮಿಲಿಯನ್ ಗಟ್ಟಲೆ ಮಾತನಾಡುವವರನ್ನು ಹೊಂದಿರುವ ಈ ಸಮುದಾಯಗಳು ಮತ್ತು ಜನಸಂಖ್ಯೆಯು ತಂತ್ರಜ್ಞಾನ ಕ್ರಾಂತಿಯಿಂದ ಹಿಂದೆ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಅವರು ಹೇಳಿದರು.

ಯೋಜನೆಯಲ್ಲಿ ಇಡೀ ಸಮುದಾಯಗಳನ್ನು ತೊಡಗುವಂತೆ ಮಾಡುವುದು

“ಕಾರ್ಯದ ಯಶಸ್ಸಿನ ಮೆಟ್ಟಿಲುಗಳಲ್ಲಿ ಅಥವಾ ಕೀಲಿಗಳಲ್ಲಿ ಒಂದೆಂದರೆ ಅದು ಇಡೀ ಸಮುದಾಯಗಳನ್ನು ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಶ್ರಮಿಸುವುದಾಗಿದೆ. ಕಾರ್ಯದ ಹೆಚ್ಚಿನ ಕೆಲಸಗಾರರು ಮಹಿಳೆಯರೆಂಬುದು ವಿಶೇಷವಾಗಿದೆ ಮತ್ತು ಅವರು ಪುರುಷರಿಗಿಂತ ಹೆಚ್ಚು ಯಶಸ್ಸಿನ ಮೆಟ್ಟಿಲು ದಾಟಲು ಹೆಚ್ಚು `ನಂಬಿಕೆಯ ವಲಯಗಳನ್ನು’ ಹೊಂದಿದ್ದಾರೆ’’ ಎಂದು ಮೈಕ್ರೋಸಾಫ್ಟ್ ನ ಸಂಶೋಧಕರಾದ ಕಾಳಿಕಾ ಬಾಲಿ ಹೇಳಿದ್ದಾರೆ.

“ಪುರುಷರು ಕೇವಲ ಎರಡು ವಿಷಯಗಳನ್ನು ಕೇಳಬೇಕಾಗಿದೆ: ಇದು ನನಗೆ ಸಾಧ್ಯವಾಗುತ್ತದೆಯೇ? ಮತ್ತು ನಾನು ಇದರಿಂದ ಹಣ ಸಂಪಾದಿಸುತ್ತೇನೆಯೇ?’’ ಎಂದು ಅವರು ಹೇಳಿದರು. “ಮಹಿಳೆಯರು ಕೇಳಬೇಕು; ನನ್ನ ಕುಟುಂಬ ಅದನ್ನು ಸ್ವೀಕರಿಸುತ್ತದೆಯೇ? ಈ ರೀತಿ ಮಾಡುವುದರಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆಯೇ? ಇದು ಯಾವುದಾದರೂ ರೀತಿಯಲ್ಲಿ ನನಗೆ ಹಾನಿಯನ್ನು ಉಂಟುಮಾಡುತ್ತದೆಯೇ? ಆಗ ಮಾತ್ರ ಇದು ಪ್ಲಾಟ್ ಫಾರ್ಮ್ ಗೆ ಬರುತ್ತದೆಯೇ ಮತ್ತು ಹಣ ಸಿಗುತ್ತದೆಯೇ?’’.

“ಕಾರ್ಯದ ಪ್ರಮುಖ ಅನುಕೂಲವೆಂದರೆ ಅದು ಸಾಕಷ್ಟು ನಂಬಿಕೆಯನ್ನು ಸೃಷ್ಟಿಸಿದೆ. ಅವರು ನಿಜವಾಗಿಯೂ ತಾವಿರುವ ಸಮುದಾಯಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ’’ ಎಂದು ಅವರು ಹೇಳುತ್ತಾರೆ.

ಪುಣೆಯಲ್ಲಿನ ನೆರೆಹೊರೆಯಲ್ಲಿ ಬೋಕಲೆ ಒಬ್ಬ ಖ್ಯಾತಿ ಪಡೆದ ವ್ಯಕ್ತಿಯಾಗಿದ್ದಾರೆ. ಇಲ್ಲಿನ ಜನರು ಆಕೆಯನ್ನು ಬಾಬಿ ತಾಯಿ ಎಂದು ಕರೆಯುತ್ತಾರೆ. ಅಂದರೆ, “ಹಿರಿಯ ಸೋದರಿ’’ ಎಂದರ್ಥ. ತಿಂಗಳ ದುಡಿಮೆಯಲ್ಲಿ ಉಳಿತಾಯ ಮಾಡುವ ಸಲುವಾಗಿ ಆಕೆ ಹಲವಾರು ಡಜನ್ ಗಟ್ಟಲೆ ಮಹಿಳೆಯರೊಂದಿಗೆ ಅನೌಪಚಾರಿಕವಾದ ಹಣಕಾಸು ಜಾಲವನ್ನು ರಚಿಸಿಕೊಂಡಿದ್ದಾರೆ. ಈ ಉಳಿತಾಯದ ಹಣದಲ್ಲಿ ಹೆಚ್ಚಿನ ಹಣವನ್ನು ಸಣ್ಣ ವ್ಯಾಪಾರ ಆರಂಭಿಸಲು ಅಥವಾ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಬಳಸಿಕೊಳ್ಳುವ ಉದ್ದೇಶವಾಗಿದೆ. ಮಹಿಳೆಯರು ಆಗಾಗ ಆಕೆಯೊಂದಿಗೆ ವ್ಯವಹಾರದ ಬಗ್ಗೆ ಅಥವಾ ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಬೋಕಲೆ ಅವರ ಮೆಣಸಿನಕಾಯಿ ಮತ್ತು ಮಸಾಲೆ ರುಬ್ಬುವ ಯಂತ್ರಗಳು ಸಣ್ಣ ಟಿನ್ ಶೆಡ್ ನ ಒಂದು ಬದಿಯಲ್ಲಿದೆ.

Three women sitting in on a step
ಭಾರತದ ಪುಣೆಯ ಸಮೀಪದ ಖರಾಡಿಯಲ್ಲಿ ತಮ್ಮ ಸ್ವಸಹಾಯ ಬ್ಯಾಂಕಿಂಗ್ ಗುಂಪಿನ ಬಗ್ಗೆ ಚರ್ಚೆ ನಡೆಸುತ್ತಿರುವ (ಎಡದಿಂದ) ಪಾರ್ವತಿ ಕೇಂಬ್ಳೆ, ಸುರೇಖ ಸಂಜಯ್ ಗಾಯಕ್ವಾಡ್ ಮತ್ತು ಬಾಬಿ ರಾಜಾರಾಮ್ ಬೋಕಲೆ. ಮೈಕ್ರೋಸಾಫ್ಟ್ ಗಾಗಿ ಚಿತ್ರ ತೆಗೆದವರು ಕ್ರಿಸ್ ವೆಲ್ಸ್ಚ್

51 ವರ್ಷದ ಸುರೇಖಾ ಸಂಜಯ್ ಗಾಯಕ್ವಾಡ್ ಅವರು ನೆರೆಹೊರೆಯವರು ಮತ್ತು ಸ್ನೇಹಿತರಲ್ಲಿ ಒಬ್ಬರಾಗಿದ್ದಾರೆ. ಆಕೆ ತನ್ನ ಮನೆಯಿಂದ ಸುಮಾರು ಅರ್ಧಗಂಟೆ ಮುಂದೆ ಸಾಗಿದರೆ ಅಲ್ಲೊಂದು ಸಣ್ಣ ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಆಕೆ ಕಾರ್ಯಕ್ಕಾಗಿ ತನ್ನ ಫೋನ್ ನಲ್ಲಿ ಮರಾಠಿ ಓದುತ್ತಾಳೆ. ತನ್ನ ಮನೆಯ ಮುಂಭಾಗದ ಮೆಟ್ಟಿಲುಗಳ ಮೇಲೆ ಬೋಕಲೆಯೊಂದಿಗೆ ಕುಳಿತು ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂತೋಷ ಪಡುತ್ತಾಳೆ.

“ನಾನು ಅದನ್ನು ಮನೆಯಲ್ಲಿಯೇ ಮಾಡಬಹುದೆಂದು ನನಗೆ ನಂಬಲಾಗಲಿಲ್ಲ. ಈ ಕೆಲಸಕ್ಕಾಗಿ ನಾನು ಬಸ್ ನಲ್ಲಿ ಪ್ರಯಾಣ ಮಾಡಬೇಕಿಲ್ಲ ಅಥವಾ ದಿನದ ಕೊನೆಯಲ್ಲಿ ಬೇರೆ ಎಲ್ಲಿಗೂ ಹೋಗಬೇಕಾಗಿಲ್ಲ’’ ಎಂದು ಆಕೆ ಸಂತೋಷದಿಂದ ಹೇಳಿಕೊಳ್ಳುತ್ತಾಳೆ.

ಕೆಲಸದ ಜೊತೆಗೆ ಶಿಕ್ಷಣವೂ ದೊರೆಯುವುದು ಒಂದು ಪ್ಲಸ್ ಪಾಯಿಂಟ್ ಆಗಿದೆ ಎಂದು ಗಾಯಕ್ವಾಡ್ ಹೇಳುತ್ತಾರೆ. ಬ್ಯಾಂಕಿನಲ್ಲಿ ಫಿಕ್ಸ್ಡ್ ಡೆಪೋಸಿಟ್ ಹೇಗೆ ಮಾಡಬೇಕು ಎಂಬುದನ್ನು ಕಲಿತಿರುವ ಆಕೆ, ತನ್ನ ಮಗನ ಕಾಲೇಜು ಶಿಕ್ಷಣಕ್ಕಾಗಿ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಉಳಿತಾಯ ಮಾಡುವ ಮಾರ್ಗವನ್ನೂ ಕಂಡುಕೊಂಡಿದ್ದಾಳೆ.

ಇತ್ತೀಚೆಗೆ ಒಂದು ದಿನ ಬೆಳಗ್ಗೆ ಕಾರ್ಯಕ್ಕಾಗಿ ಕೆಲಸ ಮಾಡಿದ ಹಲವಾರು ಮಹಿಳೆಯರು ಬೋಕಲೆ ಅವರ ಮನೆಯ ಬಳಿ ಸೇರಿದ್ದರು. 55 ವರ್ಷದ ಮೀನಾ ಜಾಧವ್ ಅವರು ತಾವು ಉಳಿತಾಯ ಮಾಡಿದ್ದ ಹಣವನ್ನು ತಮ್ಮ ಟೈಲರಿಂಗ್ ವ್ಯವಹಾರಕ್ಕಾಗಿ ಉತ್ಪನ್ನಗಳನ್ನು ಮತ್ತು ಹೊಲಿಗೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸಿದ್ದರು. ಇದರಿಂದ ಅವರು ಅಂಗಿಗಳನ್ನು ಹೊಲಿಯಲು ಆರಂಭಿಸಿದ್ದಾರೆ. ಆಕೆ ಇವೆಲ್ಲವನ್ನೂ ಕಲಿತ್ತಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತಾಳೆ. ಈಗ ಆಕೆ ತನ್ನ ಉಳಿತಾಯ ಖಾತೆಯನ್ನು ನಿಭಾಯಿಸುತ್ತಾಳೆ ಮತ್ತು ಎಟಿಎಂ ಬಳಸುವುದನ್ನೂ ಕಲಿತ್ತಿದ್ದಾಳೆ. ಈ ಹಿಂದೆ ಬ್ಯಾಂಕ್ ಗೆ ಹೋಗದೇ ಹಣವನ್ನು ಹೇಗೆ ಹಿಂಪಡೆಯಬಹುದು ಮತ್ತು ಠೇವಣಿ ಮಾಡಬಹುದು ಎಂಬುದು ಆಕೆಗೆ ತಿಳಿದಿರಲಿಲ್ಲ.

ಮತ್ತೊಬ್ಬ ಮಹಿಳೆಯು ತಾನು ಕಲಿತ ಪಾಠ ಮತ್ತು ಗಳಿಸಿದ ಹಣವನ್ನು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಖಾತೆ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಅವರೆಲ್ಲರೂ ಕಾರ್ಯದಲ್ಲಿನ ಕೆಲಸವನ್ನು ಆನಂದಿಸಿದ್ದಾರೆ ಮತ್ತು ಹಣಕಾಸು ಯೋಜನೆಗಳು ಹಾಗೂ ಆನ್ ಲೈನ್ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದಿರುವುದು ಉಪಯುಕ್ತವಾಗಿದೆ ಎಂದು ಹೆಮ್ಮೆ ಮತ್ತು ಸಂತೋಷದಿಂದ ಹೇಳಿಕೊಂಡರು. ಇದರಿಂದ ಮಹಿಳೆಯರಿಗೆ ಆಗುವ ಹೆಚ್ಚುವರಿ ಪ್ರಯೋಜನವೆಂದರೆ, ಅವರ ಸ್ಮಾರ್ಟ್ ಫೋನ್ ಗಳ ಇತರ ಪ್ರಯೋಜನಗಳಿಗೂ ಸಹಕಾರಿಯಾಗಬಹುದು ಎಂದು ಬೋಕಲೆ ತಿಳಿಸುತ್ತಾರೆ.

ಪೈಲಟ್ ಪ್ರಾಜೆಕ್ಟ್ ನಲ್ಲಿರುವ ಇತರ ಅನೇಕ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಅನ್ನು ಹೇಗೆ ಬಳಸಬೇಕೆಂಬುದು ತಿಳಿದಿರಲಿಲ್ಲ. ಆದರೆ, ಈಗ, “ಓಹ್, ನೀವು ಸ್ಮಾರ್ಟ್ ಫೋನ್ ಬಳಸಿ ಅನೇಕ ಹೊಸ ವಿಷಯಗಳನ್ನು ಕಲಿತ್ತಿದ್ದೀರಿ ಮತ್ತು ಅದು ತುಂಬಾ ಅದ್ಭುತವಾಗಿದೆ ಎಂದು ಗಂಡಂದಿರು ಮತ್ತು ಅಳಿಯಂದಿರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೋಕಲೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬಾಬಿ ರಾಜಾರಾಮ್ ಬೋಕಲೆ ತಮ್ಮ ಅನೌಪಚಾರಿಕ ಹೂಡಿಕೆ ಗುಂಪಿನ ಕೆಲವು ಮಹಿಳೆಯರೊಂದಿಗೆ ಇರುವುದು. ಅವರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಮರಾಠಿ ಭಾಷೆಯಲ್ಲಿ ರೆಕಾರ್ಡ್ ಮಾಡುವ ಮತ್ತು ಬರೆಯುವ ಮೂಲಕ AI ಭಾಷಾ ಮಾದರಿಗಳನ್ನು ರಚಿಸಲು ಡೇಟಾಸೆಟ್ ಗಳನ್ನು ರಚಿಸಲು ಸಹಾಯ ಮಾಡುತ್ತಿರುವುದು.